Bhasaka
← Back to home

ವೆಂಕಟೇಶ ಜಗದೀಶ ವೆಂಕಟೇಶ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟೇಶ ಜಗದೀಶ | ವೆಂಕಟೇಶ || ವೆಂಕಟೇಶ ಜಗದೀಶ ಸದರುಶನ | ಶಂಖಪಾಣಿ ಅಕಳಂಕ ಚರಿತಾ ನಭಾಸ್ಥಾನನರಸಿಜನಾಭ ಭಜಕರ ಸು | ಲಭಾ ವಸುಧಾ ಶ್ರೀ ದುರ್ಗಾವ | ಲ್ಲಭಾ ಭಸುಮಾಸುರನ ಕೊಂದು ಭಸ್ಮ ಭೂಷಣನ ಪಾಲಿಸಿದ ಪಾವನಕಾಯ | ವಿಷವಕ್ಷಜದ ಅಸುರೆಯ ಮಡುಹಿ ದಾಸರುಗಳ ಕಾಹುವ ಶೇಷಭೂಷಾ ||1|| ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ | ಸತ್ಯಪತಿ ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ | ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ | ಪೆತ್ತೆ ಮಂದರಗಿರಿ | ಪೊತ್ತನೆ ಅಮರರ | ವಿತ್ತ ಸಂಪತ್ತು ಇತ್ತಾ ||2|| ಅಜಿತ ನಾರಾಯಣಾ ವಿಷ್ವಕ್ಸೇನ | ಗಜವರದ ಹರಿವಿದ್ಭಾನು | ಸುಜನಪಾಲ ಪಂಕಜದಳ ಲೋಚನ | ತ್ರಿಜಗದೈವವೆ ದನುಜಕುಲ ಮರ್ದನ | ಅಜಕಾನನ ವಾಸ ವಿಜಯವಿಠ್ಠಲ ರವಿತೇಜ ವಿದ್ವದ್ ರಾಜಾ ||3||

Thoughts & Reflections

0

No reflections shared yet. Be the first to share your thoughts!

Share your thought