Bhasaka
← Back to home

ವೆಂಕಟೇಶ ಮಂತ್ರ ಒಂದೇ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟೇಶ ಮಂತ್ರ ಒಂದೇ ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಬಲನ ಭೂಸುರಹತ ಪೋಗಾಡಿದ ಮಂತ್ರ | ಬಲಿಯ ಕನಕ ಸ್ತೇಯ ಕಳದ ಮಂತ್ರಾ || ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||1|| ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ | ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ | ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ||2|| ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ | ಹರನ ಸುತ ಬರಲವನ ಪೊರೆದ ಮಂತ್ರಾ | ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ | ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ||3|| ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ | ಗಜ ಮೊದಲಾದವರ ಕಾಯ್ದ ಮಂತ್ರಾ | ರಜ ದೂರವಾಗಿದ್ದ ರಮ್ಯವಾದ ಮಂತ್ರಾ | ಕುಜನ ಕುಲವನಕೆ ಕುಠಾರ ಮಂತ್ರಾ ||4|| ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ | ಅಣು ಮಹದಲೀ ಪರಿಪೂರ್ಣ ಮಂತ್ರಾ | ಫಣಿಶೈಲ ನಿಲಯ ಸಿರಿ ವಿಜಯವಿಠ್ಠಲನ ಮಂತ್ರಾ | ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ||5||

Thoughts & Reflections

0

No reflections shared yet. Be the first to share your thoughts!

Share your thought