Bhasaka
← Back to home

ವೆಂಕಟೇಶನ ನಂಬಿರೊ ನೀವೆಲ್ಲರೂ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ ||1|| ಕುಲ ಒಂದು ನೋಡಿದಿಯಾ | ವಿದುರ ತಾನು ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ | ಶ್ಚಲ ಭಾಗ್ಯವನಿತ್ತ ||2|| ಗುಣ ಒಂದು ನೋಡಿದಿಯಾ | ವಾಲ್ಮೀಕಿ | ಗಣದ ಕೂಟದವನೆ | ಅಣೋರಣಿ ದೇವ ಕ | ರುಣ ಮಾಡಿ ಅವಗೆ ಚ | ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ ||3|| ಪತಿವ್ರತರ ನೋಡಿದಿಯಾ | ಗೋಪಿಯರು ಪತಿ ಧರ್ಮದಲ್ಲಿ ಇದ್ದರೇ | ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ | ಅತಿಶಯವಾದ ಸದ್ಗತಿಯ ಕರುಣಿಸಿದ||4|| ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು ದಣಿದು ಮಾಡಲಿಬೇಡಿರೊ | ಬಣಗುದೈವದ ಗಂಡ ವಿಜಯವಿಠ್ಠಲನ್ನ | ಮನದೊಳು ನೆನೆದರೆ ನೆನೆಸಿದ ಫಲನೀವಾ ||5||

Thoughts & Reflections

0

No reflections shared yet. Be the first to share your thoughts!

Share your thought