Bhasaka
← Back to home

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಂಕಜಾತ್ಮಕ ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಶೌರ್ಯದಲಿ ತತ್ಸರ್ವ ಜನ್ಮದಲಿ ನಾನಾಶ (ಕ) ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ ||1|| ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಮಿತಿಯಿಲ್ಲದಲೆ ಸರ್ವ ದುಃಖ ಬರಲಿ ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ ||2|| ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಇಂದು ಗ್ರಹ ಯಜ್ಞ ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನಂದನರ ಸಹಿತ ಕೆಡ | ತಿಂದು ಕಾಲವ ಕಳೆದು ನೊಂದೆ | ಬಂದೆನೊ ಕೊನೆಯಲಿ ||3|| ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ದ್ಧಾರಕನು ಇವನೆಂದು ಕಂಡಲ್ಲಿ ಪೊಗಳುತಲಿ | ಪೋರ ಬುದ್ಧಿಗಳ ಬಿಡದೆ||4|| ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ದೊರಕಿದ ಹಣ ಶರಗಿನಲಿ ಮುಡಿ ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ||5|| ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಡತೆ ನುಡಿತಿಯಲ್ಲ ಮತ್ತೆ ಎನ್ನವಗುಣಂಗಳ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ||6|| ಆದದ್ದೆಲ್ಲಾಯಿತು ಹಿಂದೆ ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಆದಿ ಪರಮ ಪುರುಷ ವಿಜಯವಿಠ್ಠಲ ನಿನ್ನ | ಪಾದವನು ಕಾಣಿಸಯ್ಯಾ||7||

Thoughts & Reflections

0

No reflections shared yet. Be the first to share your thoughts!

Share your thought