ॐ
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ
ಕಾಣುತ ಭಕುತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ
ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ
ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1||
ಶರಣಾಗತರನು ಪೊರೆವುದು ಇದು ನಿನ್ನ ಬಿರುದು
ಕರುಣವಿಂದೆನ್ನ ಕರೆವುದು
ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ
ಸ್ಮರನಪಿತನ ಮುರಹರನ ಕರುಣದಿ ||2||
ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ
ಕುಜನರ ಸಂಗದೂರಳೆ
ನಿಜ ಪದವಿಯನಿತ್ತು ಸಲಹುವ ನಮ್ಮ
ವಿಜಯವಿಠ್ಠಲ ನಿಜಪದ ತೋರಿಸೆ ||3||
Thoughts & Reflections
0No reflections shared yet. Be the first to share your thoughts!