Bhasaka
← Back to home

ವ್ಯರ್ಥ ಕೆಟ್ಟರು ಯಿಂದು ನರಮನುಜರು

Author: ವಿಜಯದಾಸCategory: ಶ್ರೀಕೃಷ್ಣ
ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ನಿದ್ರೆಯೊಳಗಿದ್ದು ಪ್ರಪಂಚ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ ||1|| ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು ||2|| ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಅಡಿಗಡಿಗೆ ಏರಿಸಿ ಕರವ ಮುಗಿದು ಮುಕುತಿ ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ||3|| ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ ಗಾತ್ರಗೆ ನೈವೇದ್ಯವೆಂದು ಬಗೆದು ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ ನಿತ್ಯ ಒಂದೊಂದು ಮಾಡದೆ ಕರ್ಮಿಗಳು||4|| ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ ಇಂದು ಬಂದದೆ ನಾಳೆ ಬರಲರಿಯದೂ ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ ಬಂದಾಗ ನೆನೆದು ಭವವನದಿ ಉತ್ತರಿಸದೆ ||5||

Thoughts & Reflections

0

No reflections shared yet. Be the first to share your thoughts!

Share your thought