Bhasaka
← Back to home

ವ್ಯಾಸಾ ಬದರಿ ನಿವಾಸಾ

Author: ವಿಜಯದಾಸCategory: ಶ್ರೀಗುರು
ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ ||1|| ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ | ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಸಿ | ಜೋಕೆ ಮಾಡುವುದ | ನೇಕ ಪರಿಯಿಂದ | ಆ ಕುರುವಂಶವ ನಿಕರ ತರಿಸದೆ | ಭೂಕಾಂತರು ನೋಡೆ | ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ||2|| ಸ್ಮರಿಸಿದವರ ಮನೋಭೀಷ್ಟ | ವಾಶಿಷ್ಟ ಕೃಷ್ಣ ನಿರುತ ಎನ್ನಯ ಅರಿಷ್ಟ | ಪರಿಹರಿಸುವದು ಕಷ್ಟದೊಳಗುತ್ಕøಷ್ಟ | ಮೆರೆವ ಉನ್ನತ ವಿಶಿಷ್ಟ | ಸುರ ನರ ಉರಗ ಕಿನ್ನರ ಗಂಧರ್ವರ | ಕರಕಮಲಗಳಿಂದ | ವರಪೂಜೆಗೊಂಬ | ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ | ಶರಸುತ ಬಲು ವಿಸ್ತರ ಜ್ಞಾನಾಂಬುಧೆ ||3||

Thoughts & Reflections

0

No reflections shared yet. Be the first to share your thoughts!

Share your thought