Bhasaka
← Back to home

ಶರಣು ಗಿರಿಯ ತಿಮ್ಮಾ

Author: ವಿಜಯದಾಸCategory: ಶ್ರೀಕೃಷ್ಣ
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಸ್ಮರ ಕೋಟಿ ಲಾವಣ್ಯ | ನಿರುತ ದೇವ ವರೇಣ್ಯ | ಕರಿರಾಜನ ಭಂಗ | ಹರಿಸಿದ ಶಿರಿ ರಂಗ | ಸುರವಿನುತ ವಿಹಂಗ | ತುರಗ ತುರಗ ವದನ | ಪರಮ ವಾರಿಜ ಸದನ | ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ ||1|| ಆದಿ ಮೂಲನೆ ನೀನು ಸಾಧುಗಳ ಸುರಧೇನು | ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ e್ಞÁನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು ||2|| ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ತಲೆ ಜಡೆ ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ ||3||

Thoughts & Reflections

0

No reflections shared yet. Be the first to share your thoughts!

Share your thought