Bhasaka
← Back to home

ಶರಣು ವಾಯು ತನುಜ ಶರಣು ಭಾಸ್ಕರ ತೇಜ

Author: ವಿಜಯದಾಸCategory: ಶ್ರೀಹನುಮಂತ
ಶರಣು ವಾಯು ತನುಜ ಶರಣು ಭಾಸ್ಕರ ತೇಜ | ಶರಣು ರಾಜಾಧಿರಾಜ | ಶರಣು ಗೋಸಹಜ | ಶರಣಾರ ಸುರಭೋಜ ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ | ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ | ತ್ಪಾತ್ರನೆ ಸುಮನಸದಲಿಗರಳ ಹೇಮ | ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ | ಪತ್ರ ಪಾದವ ಕಾ | ಲತ್ರಯ ನೆನೆಸುವನೆ ||1|| e್ಞನ ಭಕುತಿ ವೈರಾಗ್ಯ ನೀ ನೀಯೋ ಇದೆ ಭಾಗ್ಯ ನಾನಾವದೂ ಒಲ್ಲೆ | ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ | ಪ್ರಾಣಪಾವನ ಲೀಲ | ದಾನವರ ಕುಲಕಾಲ | ಏನೇನು ಮಾಳ್ಪಾಧಿಷ್ಠಾನದಲಿ | ನೀನೇ ನಾನೆಲ್ಲಿ ಎಣೆಗಾಣೆ||2|| ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ | ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು | ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ | ಬಂಧು ಬಳಗವನೇಕ ಅಂದವೆಲ್ಲವು ನಿತ್ಯ | ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು ||3|| ರಾಮಚಂದ್ರನ ದೂತ | ಸೌಮಿತ್ರಿ ಪ್ರಾಣ | ದಾತ | ರೋಮ ರೋಮ ಕೋಟಿ ಕಾಮ ಸಂಹಾರನೇ | ಭೂಮಂಡಲಧರನೆ ಭೀಮಶೈನ | ಭೀಮ ರಿಪು ಗಂಟಲಗಾಣ | ತಾಮಸ e್ಞÁನವಳಿ | ನೀ ಮುಂದೆ ಬಂದು ಸುಳಿ | ಶ್ರೀ ಮದಾನಂದತೀರ್ಥ||4|| ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ | ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ | ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ | ದಾಸರೊಳಧಿಕ ನಿನ್ನ ಲೇಶವಾದರು ಬಿಡೆ | ನಾ ಸರ್ವಥಾ ಕರೆ | ತೋಷದಲಿಡುವುದೆನ್ನ ||5||

Thoughts & Reflections

0

No reflections shared yet. Be the first to share your thoughts!

Share your thought