Bhasaka
← Back to home

ಶರಣು ಶರಣು ಲಿಂಗಾ

Author: ವಿಜಯದಾಸCategory: ಶ್ರೀಶಿವ
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಅಂತರಿಕ್ಷ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ||1|| ಮನ ವೈರಾಗ್ಯದಧಿಪತಿಯೇ | ಮುನಿದು ದುರ್ವಾಸ ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ತುನುಜೆಯ ಹೃದಯಾಬ್ಜ | ದಿನಕರ ಶಶಿಜೂಟ | ಫಣಿಭೂಷಣ ಶಂಭೋ ||2|| ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ ನಹುದೆಂದು ಧೇನಿಪನೆ||3||

Thoughts & Reflections

0

No reflections shared yet. Be the first to share your thoughts!

Share your thought