Bhasaka
← Back to home

ಶರಣು ಶೇಷಾಚಲ ನಿವಾಸಗೆ

Category: ಶ್ರೀಕೃಷ್ಣ
ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ಅಲಮೇಲುಮಂಗ ರಮಣಗೆ ಶರಣು ತಿರುವೆಂಗಳೇಶಗೆ ಧರಣಿಧರ ಗೋವಿಂದ ಮಾಧವ | ನರಹರಿ ಮಧುಸೂದನಾ | ಮುರಹರ ಮುಕುಂದ ಅಚ್ಯುತ | ಗಿರಿಜನುತ ನಾರಾಯಣಾ ||1|| ಕ್ಷೀರ ವಾರಿಧಿಶಯನ ವಾಮನ | ಮಾರ ಜನಕ ಗೋಪಿ ಜನ | ಜಾರ ನವನೀತ | ಚೋರ ರಿಪು ಸಂಹಾರ ಹರಿ ದಾಮೋದರ ||2|| ಗರುಡಗಮನನೆ ಗರಳ ತಲ್ಪನೆ | ಕರುಣಾಳುಗಳ ಒಡೆಯನೆ | ಉರಗ ಗಿರಿ ಸಿರಿ ವಿಜಯವಿಠ್ಠಲನ | ಚರಣ ಕಮಲಕೆ ನಮೋ ನಮೋ ||3||

Thoughts & Reflections

0

No reflections shared yet. Be the first to share your thoughts!

Share your thought