Bhasaka
← Back to home

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ

Author: ವಿಜಯದಾಸCategory: ಶ್ರೀದೇವಿ
ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ ||1|| ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ ||2|| ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು||3||

Thoughts & Reflections

0

No reflections shared yet. Be the first to share your thoughts!

Share your thought