Bhasaka
← Back to home

ಶಿವನ ನೋಡಿರೊ ಇಂದು ಸ್ತವನ ಮಾಡಿರೊ

Author: ವಿಜಯದಾಸCategory: ಶ್ರೀಶಿವ
ಶಿವನ ನೋಡಿರೊ ಇಂದು ಸ್ತವನ ಮಾಡಿರೊ | ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ಅಂತಕಾಪುರ ವೈರಿ | ದಿನಾಂತ ವೃಷಭನೇರಿ | ಶಾಂತಿ ಸಹಿತ ಜನರಂಗಣದಿ | ನಿಂತು ಮಾತು | ಲಾಲಿಪ ಮಹಿಮ ||1|| ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ | ವಸುಧೆಯಾಳಗೆ ಬಲಿದಾನೇಕಾ | ದಶರುದ್ರರೊಳು ಬಲು ಗುಣವಂತ ||2|| ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ | ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ ||3|| ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ ಡಮರುಗ ಪಾಣಿ | ಶರಗದ್ದುಗೆ ಸುಮೇರುವೇದಾ | ತುರಗವಾಗಿರಲಂದು ಅಂದದಿ||4|| ನಮಿಸಿ ಬರಲಿ ಬೇಡಿ ಭವದಿ | ಮಮತೆ ಓಡಿಸಿ ಭಕುತಿಯಿಂದಲಿ | ರಮೆಯರಸ ವಿಜಯವಿಠ್ಠಲನ್ನ | ಶಮೆ ದಮೆಯಿಂದ ಪೂಜಿಪ ಧೀರ ||5||

Thoughts & Reflections

0

No reflections shared yet. Be the first to share your thoughts!

Share your thought