Bhasaka
← Back to home

ಶುಕಪಿತನ ಪದಕಂಜ ಪದುಪಾ

Author: ವಿಜಯದಾಸCategory: ಶ್ರೀಗುರು
ಶುಕಪಿತನ ಪದಕಂಜ ಪದುಪಾ | ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಮತಿ ತಿರಸ್ಕಾರವಾಗಿ ನಿತ್ಯ ನೈಮಿತ್ಯಗಳು | ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು || ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು | ಅತಿಶಯದಿ ವೊದರಿ ಕೇಳು ಭವನದಾ | ಪತಿಯಾದ ಬೊಮ್ಮಗುಸರಿದರಂದು ಮೇಲು||1|| ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು | ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು | ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು | ಗತಿ ನೀನೆ ಎಂದು ಕೂಗಿದನು ಹರಿ ಕೇಳಿ | ಸತತ ನಿನ್ನನ್ನು ಕರೆದು ಪೇಳಿದವೇಗಿದನು ||2|| ಭೂಸುರನ ಗರ್ಭದಲಿ ಬಂದೆ ನೀನವತರಿಸಿ | ವಾಸುದೇವನೆಂಬ ನಾಮದಿಂದಲಿ ಜನಿಸೀ | ಭಾಸುರ ಕೀರ್ತಿಯಲಿ ಮೆರೆದೆ ಬಲು ಪಸರಿಸಿ | ದೋಷ ವರ್ಜಿತದ ಗುಣರಾಸಿ ಎನಿಸುವಾ | ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ ||3|| ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ | ಜಟ್ಟಿಗನಾಗಿ ಸೋsಹಂ ಯೆಂಬ ಅತಿ ಕ್ರೋಧಿ | ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ | ಘಟ್ಟವಚನದಿಂದ ಕಾದಿ ಅವನ ಮುರಿ | ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ ||4|| ಶ್ರುತ್ಯರ್ಥವಾರಿಧಿಯ ಮಥಿಸಿ ಅಮೃತ | ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ | ನಿತ್ಯದಲಿ ಶುಕ್ಲ ಶೋಣಿತರಹಿತ ನಿಶ್ಚಿಂತ ಅತ್ಯಂತ ಮಹಿಮ ಬಲವಂತ ನಿಮಗೆ ನಾ | ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ ||5|| ಹರಿಯೆ ಪರನೆಂದು ಬೊಬ್ಬರಿದು ಎಳಹರಿ | ಮರಿಯೆ ಬಿರಿದು ಡಂಗುರವ ಹೊಯಿಸಿ | ಚರಿಸಿದ ಗುರು ದೊರೆಯೇ | ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ | ಹರಣದೊಳಗೆ ನಿನ್ನ ಮರಿಯೆ ಆನಂದ ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ ||6|| ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ | ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ | ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ | ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ | ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ||7||

Thoughts & Reflections

0

No reflections shared yet. Be the first to share your thoughts!

Share your thought