Bhasaka
← Back to home

ಶುಭವೀವ ನಿರುತದಲಿ ಮಂದಹಾಸಾ

Author: ವಿಜಯದಾಸCategory: ಶ್ರೀಕೃಷ್ಣ
ಶುಭವೀವ ನಿರುತದಲಿ ಮಂದಹಾಸಾ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ | ಕಾನನವಾಸ ಸುರರ ಖಣಿಯೋ ||1|| ಶರಣರಿಗೆ ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ ||2|| ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ ವರವೀಯುತಿಪ್ಪಾ | ಸಿರಿ ವಿಜಯವಿಠ್ಠಲ ತಿಮ್ಮಪ್ಪಾ ||3||

Thoughts & Reflections

0

No reflections shared yet. Be the first to share your thoughts!

Share your thought