Bhasaka
← Back to home

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ

Author: ವಿಜಯದಾಸCategory: ಶ್ರೀಗುರು
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿ ಕರವ ಜೋಡಿಸಿ ಬಿನ್ನೈಪಾ || ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ | ಪರಿಹಾರ ಮಾಡಿಸಯ್ಯಾ ||1|| ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರುತ್ತರ ಕಾಣೆ ಮಾರುತಿ ಮಾರಿಗಳಿಗೆ ನಿರುತ ಮಾರಕ ನೀನಹುದೋ||2|| ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ ||3|| ಕಾಯಯ್ಯಾ ಕರುಣದಿ ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ ||4|| ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5||

Thoughts & Reflections

0

No reflections shared yet. Be the first to share your thoughts!

Share your thought