Bhasaka
← Back to home

ಶೋಕವಾಗುವುದು ಯಾತಕೆ ಎಲಾ

Author: ವಿಜಯದಾಸCategory: ಶ್ರೀಕೃಷ್ಣ
ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಜೀವ ಉಂಬುವದೆತ್ತ ಪ್ರಾಪ್ತವಾದ ಕ್ಲೇಶ ||1|| ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ ||2|| ಪಾರ ನೋಡುವದು ಈ ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು ||3||

Thoughts & Reflections

0

No reflections shared yet. Be the first to share your thoughts!

Share your thought