Bhasaka
← Back to home

ಶ್ರೀ ಕಮಲನೇತುರ ಪುಣ್ಯಗಾತುರ |

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ದೇವಕಿ ಗರ್ಭ ಸಂಭೂತ | ನಿತ್ಯ ಅಜಾತಾ | ಪಾವನ ಬಲು ಚರಿತಾ | ಕೋವಿದರರಸ ಶತ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ಗೋವಳರೊಡಗೂಡಿ | ಪಾವಿನ ಪೆಡೆ ತುಳಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ ||1|| ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಜ್ಯೋತಿರ್ಮಯ ಶರೀರ | ಮಾತಾ ಬಂಧ ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ಪಾತಕ ಕುರು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ ||2|| ಈ ಪಡವಲಾಬ್ದಿ ವಾಸಾ | ಇಂಪಾದ ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ ||3||

Thoughts & Reflections

0

No reflections shared yet. Be the first to share your thoughts!

Share your thought