Bhasaka
← Back to home

ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಕಂಜನಮಿತನಾಗಿ ಬಂದು ಮುದ್ರೆಯ ಧರಿಸಿ ಜನಕಾತ್ಮಜಗೆಯಿತ್ತು ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ ||1|| ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ಚರ್ಮವನೆ ಸುಲಿದು ಸುಯೋಧನಾಂಕನಾದ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ ||2|| ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ e್ಞÁನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಮರಿಯೆ ಜಗದೋರಿ ಗುರುವರ್ಯರಂ ಭಜಿಸಿರಯ್ಯಾ | ಅಯ್ಯಯ್ಯಾ ||3|| ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ವೃಜ ಜೀವ ಜಂತುಗಳನು ನಿಜವಾಗಿ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ||4|| ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಜಾತ ಲೋಚನೆಗೆ ಪೇಳೆ ಜಾತಿ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ ||5|| ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುe್ಞÁನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಕಲಿಮನದ ಮಾನವರಿಗೆ ಪ್ರಳಯನಂತಕನಂತೆ ಹರಿನಾಮ ದಂಡವಾ ಸೆಳೆದು ಹೊಡೆದೆಬ್ಬಿಸಿ ಹುತ್ತು ಜಲಹೊಗಿಪ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ ||6|| ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ತರುಬೇರು ಕೀಳಿ ಮೂರಾರೆರಡ್ಯೊಂದು ಕುಹಕ ಭಾಷ್ಯ | ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಹರಿ ಪರನೆಂಬೊ ಬಿರುದಾಂತ ಪರಮ ಭಾಗವತರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ ||7|| ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಗುರುವಿನನುಸುರಿಸಿ ಉಪದೇಶಕೊಳದಾ ಮಂತ್ರ ಉರಗ ಉಪವಾಸ ತಂತ್ರ ಗುರು ಮುನಿದು ಅವಘಡಿಸೆ ಹರಿ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಗುರುವಾರು ಇವರವರೆಂದೆನದೆ ವರ ವೃಕೋದರನ ಪಾದವ ನಂಬಿರೈಯ್ಯ | ಅಯ್ಯಯ್ಯಾ ||8|| ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಮಧ್ವಾಂತರ್ಯಾಮಿ ಸಿರಿ ವಿಜಯವಿಠ್ಠಲನ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ ||9||

Thoughts & Reflections

0

No reflections shared yet. Be the first to share your thoughts!

Share your thought