Bhasaka
← Back to home

ಶ್ರೀ ಲತಾಂಗಿರ ರಮಾಕೃಷ್ಣನು

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀ ಲತಾಂಗಿರ ರಮಾಕೃಷ್ಣನು ಬಾಲ ಲೀಲೆಯ ಜಗಕೆ ತೋರುತ ||1|| ಆಡಿಪಾಡುತ ಕೂಡಿ ರಮಿಸುತ ಗಾಡಿಗಾರನು ಅವಳ ಹೆಗಲನೇರಿಸಿ ||2|| ತಾನೆ ಸುಂದರೀ ಎಂದು ಗರ್ವಿಸೆ ದೀನನಾಥನು ಅದೃಶ್ಯನಾದನು ||3|| ಅಗರು ಕಸ್ತೂರೀ ಪೂಸಿ ಹೃದಯಕೇ ಮೊಗರು ಕುಚಗಳ ಮುಖದ ಕಮಲವು ||4|| ಎತ್ತ ಪೋದನೋ ರಂಗ ಎನುತಲಿ ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು ||5|| ಎಲ್ಲಿ ಪೋದನೋ ಕೃಷ್ಣ ಎನುತಲಿ ಮತ್ತೆ ಸಖಿಯರು ಹುಡುಕುತ್ತಿದ್ದರು ||6|| ಸುತ್ತ ಗೋಕುಲಾದೊಳಗೆ ಸ್ತ್ರೀಯರೂ ಮತ್ತೆ ಕೃಷ್ಣನ ಪಾದ ಕಾಣದೇ ||7|| ಗಿಳಿಯು ಕೋಗಿಲೇ ಹಂಸ ಭೃಂಗನೇ ನಳಿನನಾಭನ ಸುಳಿವು ಕಂಡಿರಾ||8|| ಕಂದ ಮೂಲವೇ ಜಾಜಿ ವೃಕ್ಷವೇ ಇಂದಿರೇಶನ ಸುಳಿವು ಕಂಡಿರಾ ||9|| ಇಂದಿರೇಶನು ನಮ್ಮನು ವಂಚಿಸೀ ಮಂದಭಾಗ್ಯರ ಮಾಡಿ ಪೋರನು||10|| ಶ್ರುತಿಗೆ ಸಿಲುಕದ ದೋಷದೂರನೇ ವ್ರತವ ಕೆಡಿಸಿರೆ ಎಲ್ಲಿಗ್ಹೋಗೋಣ||11|| ಇಷ್ಟ ಪರಿಯಲಿ ಸ್ತೋತ್ರಮಾಡಲು ರಂಗರಾಯನು ಬಂದು ಸೇರಿದ ||12|| ಬಹಳ ಪರಿಯಲಿ ಸ್ತೋತ್ರಮಾಡಲು ಕೃಷ್ಣರಾಯನು ಬಂದು ಸೇರಿದ||13|| ಮದನನಯ್ಯನಾ ಮುದದಿ ನೆನೆದರೆ ನದಿಯ ತೀರದಿ ವಿಜಯವಿಠ್ಠಲ||14|| ನದಿಯ ತೀರದ ತೀರ್ಥಪಾದರುಸಲಿಹ ಭಕುತರ ಪಾಲಿಸೂವನು ||15||

Thoughts & Reflections

0

No reflections shared yet. Be the first to share your thoughts!

Share your thought