Bhasaka
← Back to home

ಶ್ರೀ ವನಜಲೋಚನ ಭವ ಮೋಚನಾ

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀ ವನಜಲೋಚನ ಭವ ಮೋಚನಾ | ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಗ್ರೀವ ರಿಪು ಭಂಗಾ | ದೇವ ಎನ್ನಯ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ನಂದನಂದನಾ ಆನಂದಾ | ನಾಗನಾ | ಬಂಧಾ | ಹಿಂದುಗೈಸಿದ ಮುಕುಂದಾ | ಅಂದು ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ | ಮಂದನು ನಾನು | ಇಂದೀಗ ನೀನು | ಬಂದು ಸುರಧೇನು | ಪೊಂದು | ಇನ್ನೇನು | ಮುಂದಣ ಇಹಸುಖ | ಒಂದು ವಲ್ಲೆನು ಸಖ | ಕಂದ ನಂದದಿ ನೋಡು | ಕುಂದದ ವರವ ಕೊಡು | ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ | ಲೇಂದು ವದನ ಪೊರಿಯೋದೆ ಲೋಕದ ತಂದೆ ||1|| ಮಂದರಧರ ಮಾಧವಾ | ಮಹದಾದಿ ದೇವಾ | ಅಂದವಾರಿಗೆ ಸಂಜೀವಾ | ಇಂದ್ರತನಯ ಬೋವಾ | ಇಚ್ಛೈಸಿದರೆ ಕಾವಾ | ತಂದೀಯ ತಂದಾ ಪ್ರಭಾವಾ | ಶ್ರೀ ವಾಸುದೇವ | ನಿಂದು ಕರೆವೆನು ಒಂದೆ ಮನಸನು | ತಂದು ವೇಗಾನು | ಸಂಧಿಸೆಂಬೆನು | ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ | ನೊಂದು ಕೂಗಲು ಸೈರಂದ್ರಿಯ ಸಾಕೀದ ವೃಂದಾವನ ಪತಿ | ವೃಂದಾರಕ ಮುನೇಂದ್ರ ಸನಕಸನಂದನ ಯತಿಗಳ ಬಂಧು | ಅತಿ ದಯಾಸಿಂಧು ||2|| ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ | ಮಾಲಾ ಕೌಸ್ತುಭಾ ಭರಣಾ | ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ | ಲೀಲಾವತಾರ ಧಾರಣಾ | ನಾರಾಯಣ ನೀಲಲೋಹಿತ ಪಾಲಿಪನೆ ಪ್ರೀತ | ಮೂಲೋಕದ ದಾತಾ | ಲಾಲೀಸಿ ಮಾತಾ | ಪಾಲ ಸಾಗರಶಾಯಿ ಪತಿತ ನರನ ಕಾಯಿ | ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ ಕಾಲಕಾಲಕೆ ನಿನ್ನಾಳಿನ ಕೂಡಣ | ವಾಲಗ ವೆಂಕಟ | ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ ||3||

Thoughts & Reflections

0

No reflections shared yet. Be the first to share your thoughts!

Share your thought