Bhasaka
← Back to home

ಶ್ರೀನಿವಾಸನ ಕ್ಷೇತ್ರ ಎಂಥಾದೊ

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀನಿವಾಸನ ಕ್ಷೇತ್ರ ಎಂಥಾದೊ ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಾಧವನ ಒಲಿಸಿದನು ಮಣಿ ಮುಕ್ತಿ ತೀರದಲಿ||1|| ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು ||2|| ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ತುರ ಮೂರ್ತಿಗಳ ಭಜಿಸಿ ವರ ಪಡೆದ ಧರೆಯೊಳಗೆ ಆವನಾದರೆ ಬರಲು ನೀನೊಲಿದು ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ||3|| ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು ||4|| ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ ||5||

Thoughts & Reflections

0

No reflections shared yet. Be the first to share your thoughts!

Share your thought