Bhasaka
← Back to home

ಶ್ರೀಪತಿಯ ನೈವೇದ್ಯ ಕೊಡುವದು

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ ||1|| ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ ||2|| ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ||3|| ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ ||4|| ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ ||5|| ಸಕಲ ಭಕ್ಷ್ಯಗಳಲ್ಲಿ ಉದಕದಿ ಭುಕು ಪದಾರ್ಥಕೆ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ||6|| ಕ್ಷೀರ ದಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ||7|| ಸೌರಭೀ ಮಂತ್ರದಲಿ ಪ್ರೇಕ್ಷಿಸಿ ತೋರಿ ತೀವ್ರದಿ ಮುದ್ರಿ ನಿರ್ವಿಷ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ ||8|| ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ||9||

Thoughts & Reflections

0

No reflections shared yet. Be the first to share your thoughts!

Share your thought