Bhasaka
← Back to home

ಶ್ರೀಮದನಂತನೀತಾ ಶ್ರೀಮದನಂತನೀತಾ

Author: ವಿಜಯದಾಸCategory: ಶ್ರೀಕೃಷ್ಣ
ಶ್ರೀಮದನಂತನೀತಾ ಶ್ರೀಮದನಂತನೀತಾ | ಸೀಮರಹಿತಾ ಮಹಿಮನೀತಾ | ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ ಶ್ರೀಮದಾನಂತನೀತನು ಆದಿದೈವನೀತಾ ಜೀವಾದಿಗಳಿಗಭಯದಾನೀತಾ | ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ | ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ | ಕ್ರೋಧ ದೈತ್ಯರ ಸದೆದು ನಿತ್ಯ ಸಾಧುಗಳ ಕಾಯಿದನೀತಾ||1|| ಗಜವರದನೀತಾ ಗಂಗಜನ ಮನೋಭೀಷ್ಟನೀತಾ | ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ | ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ | ವಿಜಯಸಾರಥಿ ಈತಾ | ಪಂಕಜ ಬಾಂಧವನ ಭಾಸನೀತಾ||2|| ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ | ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ | ಅಪಾರ ಮಹಿಮನೀತಾ ಅಂದು ದ್ರುಪದಸುತೆಯ ಕಾಯದನೀತಾ ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ||3|| ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ | ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ | ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ | ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ||4|| ಭೂಮಿಯರಸನೀತಾ ಸಾಲಿಗ್ರಾಮ ನುಂಗಿದನೀತಾ | ದಿವಾಕರ ಮುನಿಗೆ ಒಲಿದನೀತಾ | ಶಾಮವರ್ಣ ಕಾಯನೀತಾ | ಹೋಮ ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ | ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ ||5||

Thoughts & Reflections

0

No reflections shared yet. Be the first to share your thoughts!

Share your thought