Bhasaka
← Back to home

ಸಂಪತ್ತು ನಿನಗಿಂದು ಪೊಸದಾಯಿತೆ

Author: ವಿಜಯದಾಸCategory: ಶ್ರೀಕೃಷ್ಣ
ಸಂಪತ್ತು ನಿನಗಿಂದು ಪೊಸದಾಯಿತೆ ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು ||1|| ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ತಂಡ ತಂಡದಲಿಪ್ಪ ವೈಭೋಗ ವಾಹನ | ತೋಂಡರು ಕರ ಮುಗಿದು ಕೊಂಡಾಡುವ ಭರವೊ ||2|| ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ ||3|| ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಈ ವಿಧದ ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ ||4|| ಭಕುತಗೆ ಬಂದ ಮಹಾ ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ ||5||

Thoughts & Reflections

0

No reflections shared yet. Be the first to share your thoughts!

Share your thought