Bhasaka
← Back to home

ಸಕಲ ಕಾಲದಿ ಮಾಡಿದ ಕರ್ಮವು

Author: ವಿಜಯದಾಸCategory: ಶ್ರೀಕೃಷ್ಣ
ಸಕಲ ಕಾಲದಿ ಮಾಡಿದ ಕರ್ಮವು | ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ | ಸ್ತೋತ್ರಗಳ ಮಾಡಲಿ ಕೊಂಡಾಡಲಿ || ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ ಹೋತ್ರವನು ಮಾಡಿ ಹಿತವಾಗಿ ನುಡಿಯಲಿ ||1|| ದಾನವನು ಮಾಡಲಿ ದಾಕ್ಷಿಣ್ಯವಾಗಲಿ | ಮೌನವನು ಮಾಡಲಿ ಮಾತಾಡಲಿ || ಕಾನನವ ಸೇರಲಿ ಕಂಡಲ್ಲಿ ತಿರುಗಲಿ | ಏನೇನು ಚರಿತೆಗಳ ಮಾಡುತಿರಲಿ ||2|| ಪುಣ್ಯವಾದರು ಲೇಸೆ ಪಾಪವಾದರು ಹರಿ | ಮನ್ನಿಸಿ ತಾನೀಗ ತೆಗೆದುಕೊಂಡು || ತನ್ನ ಸಮೀಪದಿ ಇಟ್ಟುಕೊಂಡು ಅವನ ಘನ್ನ ಮೂರುತಿ ವಿಜಯವಿಠ್ಠಲ ಪೊರೆವ ||3||

Thoughts & Reflections

0

No reflections shared yet. Be the first to share your thoughts!

Share your thought