Bhasaka
← Back to home

ಸತ್ಯಪ್ರಿಯ ಗುರುರಾಯ

Author: ವಿಜಯದಾಸCategory: ಶ್ರೀಕೃಷ್ಣ
ಸತ್ಯಪ್ರಿಯ ಗುರುರಾಯ ಮಂಗಳಕಾಯ ನಿತ್ಯದಲಿ ನಿಜ ಭೃತ್ಯ ಸಹಾಯ ಪ ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ ರುದ್ಧನೆ ವರನೆಂದೆದ್ದು ನೆಗಹಿ ಕರ ಬದ್ಧ ಕಂಕಣರಾಗಿ ಸಿದ್ಧ ಪ್ರಮೇಯಗಳನುದ್ಧರಿಸಿದ ಪರಿಶುದ್ಧ ಸ್ಮರ ಮಾರ್ಗಣ ಗೆದ್ದ ||1|| ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ ಸತತ ವೇದಾರ್ಥ ವಿಚಾರ ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವ ಹಿತ ಶಿಷ್ಯರಿಗೆ ನಗುತ ಪೇಳಿದ ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ ||2|| ನೆನೆಸಿದವರ ಸುರಧೇನು ನಿನಗೆಲ್ಲಿ ನಾನು ಎಣೆಗಾಣೆ ಎಣಿಸಲು ಮೇಣೂ ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ ಧ್ಯಾನ ಮಾಡುವ ತ್ರಾಣ||3||

Thoughts & Reflections

0

No reflections shared yet. Be the first to share your thoughts!

Share your thought