Bhasaka
← Back to home

ಸತ್ಯವತಿಸೂನು ವೇದವ್ಯಾಸ ಲಕುಮಿಶಾ

Author: ವಿಜಯದಾಸCategory: ಶ್ರೀಗುರು
ಸತ್ಯವತಿಸೂನು ವೇದವ್ಯಾಸ ಲಕುಮಿಶಾ | ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ ಬದುಕುವಗೋಸುಗ ಉಪಾಯದಲಿ ನಿಂದರೆ | ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು | ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ ||1|| ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ | ವನ್ನನಾಗುದಕ್ಕೆ ಪ್ರಸನ್ನ ಮೋದದಲಿ | ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ | ಮುನ್ನಿನಾಗಮವನ್ನೆ ಹೇಳಿದ ವಾಸುದೇವ ||2|| ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ | ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ | ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು | ಇಲ್ಲಿ ನೆಲೆ ಮಾಡುವ ಸುಜನರಿಗೆ ಪೊಳೆವಂದದಲಿ ಇಳೆಯೊಳಗೆನಲು ||3|| ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ | ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ | ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ ವಿಂದ ನಿನ್ನ ಪಾದ ಧ್ಯಾನದಿಂದ ಲೋಲಾಡುತಲಿರೆ ||4|| ಮರುತದೇವ ಸಂಪುಟಾಕಾರವಾದ ನೀನದರೊಳು | ಚಾರು ಸಿಲೆ ರೂಪವಾದ ಪಾರಾಶರ ಋಷಿ | ಧಾರುಣಿಗೆ ರಹಸ್ಯವ ತೋರಿಕೊಳುತಲಿ | ಕುಮಾರಧಾರಿವಾಸವಾದ ಕು | ಮಾರ ಗೊಲಿದ ವಿಜಯವಿಠ್ಠಲಾ ||5||

Thoughts & Reflections

0

No reflections shared yet. Be the first to share your thoughts!

Share your thought