Bhasaka
← Back to home

ಬರಿದೆ ಕರೆಯೆ ನೀ ಬಾರದಿರುವೆ

Category: ಶ್ರೀಕೃಷ್ಣRaaga: ಗೌಡಮಲ್ಹಾರTaala: ತ್ರಿತಾಲ
ಬರಿದೆ ಕರೆಯೆ ನೀ ಬಾರದಿರುವೆ ಪರಮ ಪ್ರೇಮದಿಂ ಕರೆದರೆ ಬರುವೆ || ತಿಳಿತಿಳಿದು ನಿನ್ನ ಕರೆಯದೆ ಉಳಿದೆ ಇಳೆಯ ಆಟದಲಿ ಮೈಮರೆತೆ | ಕಳೆಯೈ ಮೋಹದ ಆವರಣವ ನೀ ಬೆಳಕ ತೋರೊ ಹರಿ ಕರುಣಾಜಲಧೇ || ಕನಕಪರಿಣವೀ ಭುವನ ವಿರಚನೆ ಕನಸು ಸಾಕೋ ಕೃಷ್ಣ ಕೈಮುಗಿವೆ | ದಿನಕರನುದಯಕೆ ವನಜವಿಕಸನ ಮನವರಳಿಸೊ ಹರಿ ಪರಮಗುಣನಿಧೇ ||

Thoughts & Reflections

0

No reflections shared yet. Be the first to share your thoughts!

Share your thought