Bhasaka
← Back to home

ಸಲಹೊ ಸಾತ್ತ್ವಿಕ ದೈವವೆ

Author: ವಿಜಯದಾಸCategory: ಶ್ರೀಕೃಷ್ಣ
ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ ನೀಲದ ವರ್ಣ ಆದಿಕೇಶವಾ ಕನಕ ಕಾಮಿನಿ ಕುಂಭಿಣಿಯಿಂದ ಬರುವ ಚಿಂತೆ | ಕನಸಿನೊಳಗಾದರೂ ದೂರಾಗಲಿ | ಕನಕೋದರಗೆ ಸಾಮ್ಯವಾದ ಜೀವನದಲ್ಲಿ | ಕನಲದೆ ಭಕುತಿ ಇರಲಿ ಎಂದೆಂದಿಗೆ | ಮನವು ನಿನ್ನಾಧೀನ ದೇವರದೇವ ||1|| ಕನಕ ನಯನ ಮಯನ ಕಂಡವರಿಗೆ ಜ್ಞಾನ | ಕನಕವರುಷವ ಕರೆವ ವಾಸುದೇವಾ | ಕನಕಕೇಶಪ್ರಿಯ ಕಾಮಿತಫಲದಾಯಕ | ಕನಕ ಪರ್ವತದಿಂದ ಬಂದ ಗೋವಿಂದ ವ | ಚನವೇ ನಿನ್ನಾಧೀನವೋ ದೇವರ ದೇವ ||2|| ಕನಕ ಮಾಲಿಗೆ ಒಲಿದ ಕಮಲದ ಲೋಚನ | ಕನಕಾಂಬರಧರಾನಂದ ಮೂರ್ತಿ | ಕನಕಕಾಯ ನಮ್ಮ ವಿಜಯವಿಠ್ಠಲರೇಯ | ಕನಕರಿಸುವಾಗ ನಿನ್ನ ಧ್ಯಾನವೆ ಕೊಡು | ತನುವೆ ನಿನ್ನಾಧೀನವೊ ದೇವರದೇವ ||3||

Thoughts & Reflections

0

No reflections shared yet. Be the first to share your thoughts!

Share your thought