Bhasaka
← Back to home

ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ

Author: ವಿಜಯದಾಸCategory: ಶ್ರೀಕೃಷ್ಣ
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ ವರ ಪೋತರಾಜಾ ಬೊಮ್ಮೆಯನು ಬೀರೆದೇವರು ಹಾದಿಬೀದಿಯ ಬಸವಣ್ಣ ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ ||1|| ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ ಹಳ್ಳದ ತೀರದ ಹಾಳದೇವಿ ಅಮ್ಮ ಜಲದೇವಿ ಜಕ್ಕಮ್ಮನೆಂತೆನಲು ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ ||2|| ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ ವನಶಕ್ತಿ ಚವಡಮ್ಮ ಜವನಿಕೆ ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ ||3|| ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ ಮುಂಡೆ ಮೂಕಾರುತಿ ಬೆಂಚೆಮ್ಮನು ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ ಹಿರಚು ಗುಂಪಿನ ಬಳಗ ಕಂಡರೇನಿಲ್ಲ ||4|| ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ ಅನ್ಯದೇವತೆಗಳ ಭಜನೆ ಹೊಲ್ಲ ಚೆನ್ನಾಗಿ ಸಿರಿ ವಿಜಯವಿಠ್ಠಲನ ಯುಗಳಪಾದ ಸನ್ನುತಿಸಿದರೆ ಪರಮ ಪದವಿಯಮ್ಮ ||5||

Thoughts & Reflections

0

No reflections shared yet. Be the first to share your thoughts!

Share your thought