Bhasaka
← Back to home

ಸಾಕು ಇಹಕೆನ್ನ ನೂಕದಿರು ತಂದೆ

Author: ವಿಜಯದಾಸCategory: ಶ್ರೀಕೃಷ್ಣ
ಸಾಕು ಇಹಕೆನ್ನ ನೂಕದಿರು ತಂದೆ ವಾಕು ಕೇಳು ಪರಾಕು ಮಾಡದೆ ಸಾಕು ದಯದಿಂದನೇಕ ಮಹಿಮನೆ ಏಕಾಮೇವಾದ್ವಿತೀಯ ಮಂಗಳಾಂಗ ಮಾತಂಗವರದ ವಿ- ಹಂಗಗಮನ ಭುಜಂಗಶಯನ ತು- ರಂಗವದನ ಶುಭಾಂಗ ರಿಪುಕುಲ- ಭಂಗ ಅಸಿತಾಂಗ ಅ.ಪ. ಶೃಂಗಾರಾಂಬುಧಿ ರಂಗ ನಿನ್ನಯ ಅಂಗಸಂಗಕ್ಕೆ ಅಂಗೀಕರಿಸಿದ ಸಂಗಿತರ ಚರಣಂಗಳಬ್ಜಕೆ ಭೃಂಗನಪ್ಪೆನೆಂತೊ ||1|| ಮಾನವಾವುದು ಸುಮ್ಮನಿರೆ ಪವ- ಮಾನವಂದಿತ ನಿನ್ನ ಪೋಲ್ವ ಸ- ಮಾನರಾರನು ಕಾಣೆ ಎನ್ನಭಿ- ಮಾನದ ದೊರೆಯೆ ಮಾನವಾಧೀಶ ಮಾನವಮಾನ- ಮಾನದಿಂದ ಕ್ರಮಾನುಸಾರನು ಮಾನಗೊಳಿಸದೆ ಮಾನವಿತ್ತು ದು- ಮ್ಮಾನವನೆ ಬಿಡಿಸೊ ||2|| ಬಲ್ಲೆ ನಿನ್ನಯ ಎಲ್ಲ ಪರಿಯಲಿ ಬಲ್ಲಿದರಿಗತಿ ಬಲ್ಲಿದನು ಸಿರಿ- ವಲ್ಲಭಾ ನೀನಲ್ಲದಿಲ್ಲೆಂದು ಎಲ್ಲ ತುತಿಸುತಿದೆ ಸೊಲ್ಲುವೊಂದನು ನಿಲ್ಲುತಲಿ ಕೇಳು ಎಲ್ಲು ಬಯಸದೆ ಇಲ್ಲಿಗೇ ಬಂದೆ ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ ಬಲ್ಲದನು ಮಾಡೋ||3||

Thoughts & Reflections

0

No reflections shared yet. Be the first to share your thoughts!

Share your thought