Bhasaka
← Back to home

ಸಾಕೇತಪುರ ವಾಸಿ ಕಪಟವೇಷ

Author: ವಿಜಯದಾಸCategory: ಶ್ರೀರಾಮ
ಸಾಕೇತಪುರ ವಾಸಿ ಕಪಟವೇಷ | ಶ್ರೀಕಮಲನಾಭನ ನಖದಲಿ ಕಾಶೀ ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು | ವಿಶ್ವ ವಿಶ್ವಬಾಹು ವಿಶ್ವರೂಪ ರೂಪ || ವಿಶ್ವ ಬ್ರಹ್ಮಾಂಡ ಆಧಾರ ಕಾರಣ | ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ ||1|| ಮಸ್ತಕಾಂಗುಟ ಪರಿಯಂತ ರೋಮಕೂಪ | ವಿಸ್ತಾರ ಮಹಿಮ ಅಗಣಿತ ಕಮಲಜ | ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು | ನಾಸ್ತಿ ವಿಷ್ಣು ಪರದೈವ ಇಹಪರದಲಿ||2|| ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ ಸೃಷ್ಟಿಸುವ ಕಣ್ಣು ಎವೆ ಹಾಕುವ || ಅಷ್ಟರೊಳನೇಕ ಬ್ರಹ್ಮಾಂಡ ನಾಟಕ | ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ ||3|| ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ | ಮೃತ್ಯು ಹಾ ಕಾಲಪ್ರಮಾಣ ಪರುಷಾ || ಸತ್ಯ ನಿಗಮಾವಳಿ ಜ್ಞಾನ ಗಮ್ಯ ಶರಧಿ | ಸತ್ಯ ಸಂಕಲ್ಪ ನಿಷ್ಠನಾಹಂತೆ ||4|| ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ | ಭುಜಧರನಯ್ಯಯಾ | ಅಮಿತಕಾಯಾ | ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ | ಭುಜಗಗಿರಿ ವಿಜಯವಿಠ್ಠಲ ವೆಂಕಟೇಶಾ ||5||

Thoughts & Reflections

0

No reflections shared yet. Be the first to share your thoughts!

Share your thought