Bhasaka
← Back to home

ಬರಿದೆ ಹೋಯಿತು

Author: ಪುರಂದರದಾಸCategory: ಶ್ರೀಕೃಷ್ಣRaaga: ಪಹಾಡೀTaala: ತೇವರಾ
ಬರಿದೆ ಹೋಯಿತು ಹೋಯಿತು ಹೊತ್ತು | ನರಜನ್ಮಸ್ಥಿರವೆಂದು ನಾನಿದ್ದನೊ ರಂಗ || ಆಸೆ ಎಂಬುದು ಎನ್ನ ಕೇಶಪಡಿಸುತಿದೆ ಗಾಸಿಯಾದೆನೊ ಹರಿ ನಾರಾಯಣ | ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ || ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ ಮರುಳುತನದಲಿ ಮತಿಹೀನನಾದೆ | ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ ಮರೆಯದೆ ಸಲಹಯ್ಯ ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought