Bhasaka
← Back to home

ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ

Author: ವಿಜಯದಾಸCategory: ಇತರೆ
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಘೋರ ಪಾತಕಾಂಬುಧಿಯ ದೂರ ಮಾಳ್ಪರ ಮೋದತೀರ್ಥರ ಮತವ ಸಾಧಿಸುವರ | ಪಾದ ಸೇವ್ಯರ ದುರ್ಬೋಧ ಕಳೆವರ ||1|| ಭಾಷ್ಯತತ್ವ ಸುವಿಶೇಷ ಮಾಳ್ಪರ | ದೋಷ ದೂರರ ವಾಸವಾದಿ ರೂಪರ||2|| ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರ | ನೇಮನಿತ್ಯದ ನಿಷ್ಕಾಮನಾ ವರ ||3|| ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- | ಶಿಕ್ಷಿತಾದರ ಅಪೇಕ್ಷ ರಹಿತರ ||4|| ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯ ರಾಯರ||5||

Thoughts & Reflections

0

No reflections shared yet. Be the first to share your thoughts!

Share your thought