Bhasaka
← Back to home

ಸಾಲವ ಕೊಡದಿದ್ದರೆ ನಿನಗೆ

Author: ವಿಜಯದಾಸCategory: ಶ್ರೀಕೃಷ್ಣ
ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ ||1|| ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು ||2|| ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ||3|| ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕಾಲಿಗೆನ್ನ ಕೊರಳ ಸಂಕಲೆಯಿಂದ ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ ||4|| ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಚಿತ್ತ ನಿರ್ಮಳದಲ್ಲಿ ಇಂದ ಎನ್ನ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು ||5|| ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ ||6|| ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ ||7||

Thoughts & Reflections

0

No reflections shared yet. Be the first to share your thoughts!

Share your thought