Bhasaka
← Back to home

ಸಿಂಗನಾ ಏರಿದ ನರಸಿಂಗ ತೋಮರವ ಪಿಡಿದು

Author: ವಿಜಯದಾಸCategory: ಶ್ರೀನರಸಿಂಹ
ಸಿಂಗನಾ ಏರಿದ ನರಸಿಂಗ ತೋಮರವ ಪಿಡಿದು | ರಂಗ ವೈಭೋಗದಿಂದ | ನಲಿದು ಚತು | ರಂಗ ಬೀದಿಯೊಳು ಮೆರೆದಾ ಮುತ್ತಿನ ಕಿರೀಟ ಮೇಲೆ ಎತ್ತಿದ ಸತ್ತಿಗೆ ಪೊಳೆಯ | ಸುತ್ತ ಮುತ್ತ ಬೊಮ್ಮಾದಿಗಳು | ವಾಹನ ರಥ | ಹತ್ತಿ ಬರುವ ಪುರದ ಜನಗಳು ||1|| ಸನಕಸನಂದನ ಸನತ್ಸುಜಾತ ಸನತ್ಕುಮಾರ | ಮುನಿವರರು ವೇದ ಘೋಷಣೆ ಉಚ್ಚರಿಸುತ್ತ | ಅನಿಮಿಷರಾಗಿ ಇಚ್ಚೈಸುತಾ ||2|| ಗಂಧರ್ವಾದಿ ಗಾಯನಾ ನಾರಂದನು ಪಾಡುತ್ತ ಬರೆ | ಇಂದು ಮೌಳಿ ಮುಂದೆ ಕುಣಿಯುತಾ | ತಕ್ಕಥೈ ಎಂದು ತುಂಬರನು ಹಾಡಿ ಪಾಡುತಾ ||3|| ವೇಶ್ಯ ಜನರು ರಂಭೆ ಊರ್ವಶಿ ಪಾತ್ರ ಮಾಡುತಿರೆ | ದಾಸಾನುದಾಸರು ಪಾಡುತಾ | ಸಲಹೊ ಶ್ರೀನಿ ವಾಸನೆಂದು ಬೇಡಿಕೊಳುತಾ ||4|| ಮಂಗಳಪಾಂಗ ಸಾಂಗೋಪಾಂಗದಿಂದ ಒಪ್ಪೆ ಅಲಮೇ ಲ್ಮಂಗ ವಿಜಯವಿಠ್ಠಲ | ತಿರುಪತಿ ತಿರು ವೆಂಗಳೇಶ ಶ್ರೀ ವೆಂಕಟೇಶಾ ||5||

Thoughts & Reflections

0

No reflections shared yet. Be the first to share your thoughts!

Share your thought