Bhasaka
← Back to home

ಸೀತೆಯ ಭೂಮಿಜಾತೆಯ

Author: ವಿಜಯದಾಸCategory: ಶ್ರೀದೇವಿ
ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿಹಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ||2|| ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ವಿಜಯಲಕ್ಷ್ಮಿ ಗಜಗಮನೆಯ ನಿತ್ಯ | ಸುಜನವಂದಿತೆ ಅಹಿವೇಣಿಯ ||3||

Thoughts & Reflections

0

No reflections shared yet. Be the first to share your thoughts!

Share your thought