Bhasaka
← Back to home

ಸುಬ್ಬರಾಯ ಶುಭ ಕಾಯಾ

Author: ವಿಜಯದಾಸCategory: ಶ್ರೀಕೃಷ್ಣ
ಸುಬ್ಬರಾಯ ಶುಭ ಕಾಯಾ | ಸುಬ್ಬರಾಯ ಶುಭ ಕಾಯಂಗಜ ನೀನೆ || ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು ಮಾರಾ ಸಾಂಬಾ || ಸಾರಿದೆ ನಿನ್ನವತಾರ ಮೂಲರೂಪ || ಸಾರಿಸಾರಿಗೆ ಸಂಸಾರಮನ ವಿ || ಸ್ತಾರವಾಗದಂತೆ ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1|| ಮಾಡುವೆ ವಂದನೆ ಸತತ | ಸಜ್ಜನರೊಳ | ಗಾಡಿಸು ಭಕ್ತ ಪ್ರೀತಾ || ಪಾಡಿದವರ ಕಾ | ಪಾಡುವ ರತಿ-ಪತಿ | ಈಡಾರು ನಿನಗೇ ನಾಡಿನೊಳಗೆಲ್ಲ | ಬೇಡುವೆ ದಯವನ್ನು | ಮಾಡುವಿರಕುತಿಯ | ನೀಡು ಬಿಡದಲೆ ನೋಡು||2|| ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ | ಮುಕ್ಕಣ್ಣಗಳ ತನಯ || ಸೊಕ್ಕಿದ ತಾರಕ ರಕ್ಕಸ ಹರ ದೇ | ವಕ್ಕಳ ನಿಜ ದಳಕೆ ನಾಯಕನಾದೆ || ಪಕ್ಕಿವಾಹನ ಸಿರಿ ವಿಜಯವಿಠ್ಠಲನ | ಚಕ್ರ ಐದೊಂದು ವಕ್ರಾ ||3||

Thoughts & Reflections

0

No reflections shared yet. Be the first to share your thoughts!

Share your thought