Bhasaka
← Back to home

ಸುರನದಿ ಪೆತ್ತವನೆ ನಿನಗೆ ಮಜ್ಜನವೆ

Author: ವಿಜಯದಾಸCategory: ಶ್ರೀಕೃಷ್ಣ
ಸುರನದಿ ಪೆತ್ತವನೆ ನಿನಗೆ ಮಜ್ಜನವೆ | ಪಾಲಾರಮನೆಪುಳುವನೇ ನಿನಗೀ ಕ್ಷೀರಾಭಿಷೇಕವೇ ? ಸರಸಿಜಕುಸುಮ ಗಂಧಾ ಪರಿಮಳದಿಂದ ಪೊಡೆದಾ ದೈವವೇ | ಅವರೆ ಯೊಳಗಿನ ಕುಸುಮ ನಿನಗೆ ಮೆಚ್ಚೆ | ಎರಡು ಕಂಗಾಳಿಂದ ಲೋಕ ಬೆಳಗಿಸುವವನ ವಿರಚೇ ಶಿವ ದೀಪದಿಂವೆಗ್ಗಳವೇನೊ ನಿನಗೆ | ||1|| ಕರದೊಳಗೆ ಮುನಿಗೆ ರಸಾಯನವುಳ್ಳ ಶ್ರೀ ತೋರಿ ಶಿರವನೆ ತರಿಸಿ ತೊಲಗಿದ ಪದಾರ್ಥದಿಂದೇನಯ್ಯಾ | ಹಂಸ ಕು ಬೇರ ನಿನ್ನವರಾಗಿದೆ | ಬರಿದೆಯಲಾ ಯೆನ್ನ ಸುವರ್ಣ ಪುಷ್ಪವೆ | ಪರಿಪರಿಗಾಯನ ನಾರದಾದ್ಯರು ಪಾಡೆ ಪೊಗಳಬಲ್ಲನೆ ನಿನ್ನನಗಣಿತ ಸ್ತೋ ತ್ರಗಳಿಂದಯೀ ಹೇಳಿಕೆಯೇನೋ | ಸುಗುಣ ಸುಹಸವಲ್ಲ ವಿಜಯವಿಠ್ಠಲದೊರೆಯೆ ನಿನಗೆರಗಿ ಕೈಮುಗಿವೆನೊ ತರಳತನದಲ್ಲಿ ನಾನು||2||

Thoughts & Reflections

0

No reflections shared yet. Be the first to share your thoughts!

Share your thought