Bhasaka
← Back to home

ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು

Author: ವಿಜಯದಾಸCategory: ಶ್ರೀಕೃಷ್ಣ
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು | ಇಂದೆನ್ನ ಜನುಮ ಸಫಲ | ಹಿಂದೆ ಅನಂತೇಶನೆಂದೆಂಬ ನಾಮದಲಿ | ಚಂದದಲಿ ಮೆರೆವ ಕಂಬು | ಕಂದರದ | ತಿಮ್ಮನ ಮುಕುಟ ಮುತ್ತಿನ ಹಾರ | ಮಕರ ಕುಂಡಲಧಾರ | ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ | ಪೊಕ್ಕಳ ಕಮಲ ಸುಂದರ | ಅಕುಟಿಲ ಹೃದಯಮಂದಿರ | ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ | ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ||1|| ಉಂಗುರ ಕೈ ಬೆರಳ ಕರ ರ| ಥಾಂಗ ಶಂಖ ಪಾಣಿ ಮಂಗಳಾಂಗಿಯ ರಮಣಾ | ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ | ಮುಂಗೈಯ ಫಣಿಯ ತಿಲಕಾ | ಬಂಗಾರದಂಬರ ಭವದೂರಾ ಪದದಲ್ಲಿ | ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ ||2|| ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ | ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ | ಕೊಂಡಾಡಿದವರಿಗೆ ತಂಡ | ತಂಡದ ವರವೀವಾ | ಮಂಡಲದೊಳಧಿಕ ಮಂಡೂಕ ವರದ | ಉದ್ದಂಡ ವಿಜಯವಿಠ್ಠಲ| ಅಂಡಜಗಮನ ಕೃಷ್ಣಾ ತಿಮ್ಮಾ||3||

Thoughts & Reflections

0

No reflections shared yet. Be the first to share your thoughts!

Share your thought