Bhasaka
← Back to home

ಸುಳ್ಳು ಪೇಳುವೆ ನಿಮಗೆ

Author: ವಿಜಯದಾಸCategory: ಶ್ರೀಕೃಷ್ಣ
ಸುಳ್ಳು ಪೇಳುವೆ ನಿಮಗೆ ಸುಳ್ಳು ನಮ್ಮನೆ ದೈವ ಕಳ್ಳನ ಬಂಟರು ನಮಗೆ ಕಡೆ ಮೊದಲಿಲ್ಲಾ ನಾಮವಿಲ್ಲದೆ ಬೂದಿ ನೇಮ ಮಾಡೋದು ಸುಳ್ಳು ನಾಮವೆಂಬುದೆ ಬುದ್ಧಿ ಮಿಕ್ಕವೆಲ್ಲ ಸುಳ್ಳು ||1|| ಒಂದು ಅಹುದು ಎರಡು ಎಂದೆಂದಿಗೆ ಸುಳ್ಳು ಮುಂದರಿದು ನೋಡು ಯಿಂಥ ಅಂದವೆಲ್ಲ ಸುಳ್ಳು ||2|| ಸೃಷ್ಟಿಯ ಮತ್ತೊಬ್ಬ ಪುಟ್ಟಿಸುವುದೆ ಸುಳ್ಳು ಧಿಟ್ಟ ವಿಜಯವಿಠ್ಠಲನಲ್ಲದೆ ಶ್ರೇಷ್ಠನೆಂಬುವರು ಸುಳ್ಳು||3||

Thoughts & Reflections

0

No reflections shared yet. Be the first to share your thoughts!

Share your thought