Bhasaka
← Back to home

ಹದಿನಾಲ್ಕು ಲೋಕವನಾಳುವ ತಂದೆಗೆ

Author: ವಿಜಯದಾಸCategory: ಶ್ರೀಕೃಷ್ಣ
ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1|| ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ||3||

Thoughts & Reflections

0

No reflections shared yet. Be the first to share your thoughts!

Share your thought