Bhasaka
← Back to home

ಹನುಮಂತ ಬಲವಂತ ಅತಿ ಗುಣವಂತಾ

Author: ವಿಜಯದಾಸCategory: ಶ್ರೀಹನುಮಂತ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ವಾಯುಕುಮಾರ ದೋಷ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ತೋಯಜ ಕೈಯಿಂದಾಯತ ಮುದ್ರಿಕುಪಾಯದಿ ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ ||1|| ವರ ಕುಂತಿನಂದನಾ ಕಲಿಯ ಭಂಜನಾ | ಗರಳನ್ನ ಭುಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ತರಬಲು ಪರಿ ಪರಿಹರಿಸಿದೆ ಸಮರಾ ||2|| ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | e್ಞÁನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು ||3||

Thoughts & Reflections

0

No reflections shared yet. Be the first to share your thoughts!

Share your thought