Bhasaka
← Back to home

ಹರಹರ ಮಹಾದೇವ ಮಹಾನುಭಾವಾ

Author: ವಿಜಯದಾಸCategory: ಶ್ರೀಶಿವ
ಹರಹರ ಮಹಾದೇವ ಮಹಾನುಭಾವಾ | ಪರಮೇಶ ಮೃತ್ಯುಂಜಯ ಭವ ಯ್ಯೋಮಕೇಶ | ಸುರಹರ ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಭಸಿತ ಭೂಷಿತ ಶಿವ ಭಕ್ತ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ನಿಶಾಚರ ದಶಶಿರ ಪ್ರಸನ್ನ ಭಜಿಪರ ||1|| ಗುರುಕುಲೋತ್ತ,ಮ ತುಂಗ ವೃಷಭ | ತುರಂಗ ಸುರನದಿ ಧರ ಧೀರ ಜಗದೋದ್ಧಾರ | ನಿರುತ ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಪುರ ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ಗುರುವರ ಸುಸ್ಥಿರ ದುರಿತ ವಿದೂರಾ ||2|| ಈಶಕಪರ್ದಿ ಉಗ್ರೆ ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ನಾಶರಹಿತ ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ದಾಸರೊಳು ಘನದಾಸನು ಪುರಂದರ | ದಾಸನ ದಾಸನ ಕ್ಲೇಶವಿನಾಶಾ ||3||

Thoughts & Reflections

0

No reflections shared yet. Be the first to share your thoughts!

Share your thought