Bhasaka
← Back to home

ಹರಿ ಎಂಬ ನಾಮ ಎರಡಕ್ಷರವ

Author: ವಿಜಯದಾಸCategory: ಶ್ರೀಕೃಷ್ಣ
ಹರಿ ಎಂಬ ನಾಮ ಎರಡಕ್ಷರವ ಸ್ಮರಿಸುವಾಲೋಚನಿಗೆ ದುರಿತ ಕಾನನ ಛೇದ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ ||1|| ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ ||2|| ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ವಾರ್ತಿಯನು ಕೇಳಿ ಅಂತಕ ಬಂದು ಕಾದೆ ಸ ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ||3|| ಹದಿನಾರು ಸಾವಿರ ತರುಣಿಯರು ಅಸುರನ್ನ ಸದನದಲಿ ಸೆರೆಬಿದ್ದು ಹರಿಯ ತುತಿಸೇ ಮುದದಿಂದ ಹರಿಪೋಗಿ ಖಳನ ಕೊಂದು ಆ ಸುದತಿಯರಿಗೆ ತನ್ನ ಅಂಗಸಂಗವನಿತ್ತ||4|| ಕಂಡವರ ಮನೆ ಉಂಡು ಚಾಂಡಾಲರ ಕೂಡ ಮಂಡಲದೊಳಗೆ ಪಾತಕನಾದರೂ ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ||5||

Thoughts & Reflections

0

No reflections shared yet. Be the first to share your thoughts!

Share your thought