Bhasaka
← Back to home

ಹರಿ ಪರದೈವ ಚತುರ್ದಶ ಲೋಕಕೆ

Author: ವಿಜಯದಾಸCategory: ಶ್ರೀಕೃಷ್ಣ
ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು||1|| ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಉರ್ವಿಯನು ತಿರುಗಿದನು ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು ||2|| ಜೀವನದೊಳಗೆ ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ ಎಂದು ಕೂಗೆ || ನಾವು ತಾವು ಎಂದು ಎಲ್ಲರು ಸುಮ್ಮನಿರೆ | ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು ||3|| ಹಯಮುಖನು ವೇದಗಳು ಕದ್ದೌಯೆ ಸಕಲರು | ಭಯಬಿದ್ದು ನಿತ್ರಾಣರಾಗಿರಲು || ಜಯದೇವಿ ರಮಣನು ವೇದವನು ತಂದು ಜಗ | ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು ||4|| ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ | ಮದಡ ಮನುಜರೆಲ್ಲ ನೆಲೆಗಾಣದೆ || ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ | ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ||5||

Thoughts & Reflections

0

No reflections shared yet. Be the first to share your thoughts!

Share your thought