Bhasaka
← Back to home

ಹರಿಚಿತ್ತಾ ಸತ್ಯ ಹರಿಚಿತ್ತಾ

Author: ವಿಜಯದಾಸCategory: ಶ್ರೀಕೃಷ್ಣ
ಹರಿಚಿತ್ತಾ ಸತ್ಯ ಹರಿಚಿತ್ತಾ ನರಚಿತ್ತವಿದ್ದಂತೆ | ನಡೆಯದು ಲವಲೇಶ ಸುದತಿ ಮಕ್ಕಳು ಭಾಗ್ಯ ಬೈಸೋದು ನರಚಿತ್ತ | ಮದಿವಾಗದಿರುವೋದು ಹರಿಚಿತ್ತವು || ಕುದುರೆ ಅಂದಣ ಆನೆ ಬೈಸೋದು ನರಚಿತ್ತ | ಪದಚಾರಿ ಗೈಸೋದು ಹರಿಚಿತ್ತವಯ್ಯಾ ||1|| ವಿಧ ವಿಧ ಯಾತ್ರೆಯ ಬೈಸೋದು ನರಚಿತ್ತ | ವದಗಿ ಬರುವ ರೋಗ ಹರಿಚಿತ್ತವೊ || ಸದ ಅನ್ನದಾನವ ಬೈಸೋದು ನರಚಿತ್ತ | ಉದತಕ್ಕೆ ಅಲಸೋದು ಹರಿಚಿತ್ತವಯ್ಯ ||2|| ಭೂಮಿಯನಾಳಬೇಕೆಂಬೋದು ನರಚಿತ್ತ | ಆ ಮಾತಿಗೆ ಅಡ್ಡ ಹರಿಚಿತ್ತವು || ವಿಜಯ ವಿಠಲನ್ನ ಬೈಸೋದು ನರಚಿತ್ತ | ಕಾಮಿಸಿ ಜೀವ್ಯೊದು ಹರಿಚಿತ್ತವಯ್ಯಾ ||3||

Thoughts & Reflections

0

No reflections shared yet. Be the first to share your thoughts!

Share your thought