Bhasaka
← Back to home

ಬಲು ಮಧುರವೊ

Author: ವಚನವೇದCategory: ಪರಬ್ರಹ್ಮRaaga: ಕೇದಾರಾTaala: ಏಕತಾಲ
ಬಲು ಮಧುರವೊ ನಿನ್ನ ಹೆಸರು ಕಿವಿಗೆ ಸುಧೆಯ ಕರೆವುದು | ದೀನಶರಣ ಪ್ರಾಣರಮಣ ಅಮೃತ ಭವನ ಧನವಿದು || ನಿನ್ನ ಹೆಸರ ಕೀರ್ತಿಸಿದರೆ ನಾವು ಅಮರರೆಪ್ಪೆವೋ | ಚಿಂತೆಗಡಲು ನಿಮಿಷದಲ್ಲಿ ಬತ್ತುತ ಬಯಲಪ್ಪುದೋ || ಹೃದಯದಲ್ಲಿ ನಿನ್ನ ಮಧುರ ಗಾಯನವನೆ ಗೈವೆವು | ಹೃದಯನಾಥ ಚಿದಾನಂದ ನಿರುತ ನಿನ್ನ ನೆನೆವೆವು ||

Thoughts & Reflections

0

No reflections shared yet. Be the first to share your thoughts!

Share your thought