Bhasaka
← Back to home

ಹರಿಯ ನೆನಸಿದ ದಿವಸ ಶುಭಮಂಗಳಾ

Author: ವಿಜಯದಾಸCategory: ಶ್ರೀಕೃಷ್ಣ
ಹರಿಯ ನೆನಸಿದ ದಿವಸ ಶುಭಮಂಗಳಾ ಹರಿಯ ನೆನಸಿದ ದಿವಸ ಅವಮಂಗಳಾ ಹರಿಯ ನೆನಸಿದ ನಿಮಿಷ ಆವಾಗಲೂ ಹರುಷ | ಹರಿಯ ನೆನಸದ ದಿವಸ ದುರ್ಮಾಸನಾ || ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ | ಹರಿಯ ನೆನಸದ ಘಳಿಗೆ ಯಮನ ಬಳಿಗೆ ||1|| ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ | ಹರಿಯ ನೆನಸದ ಪ್ರಹರ ಹೀನಾಚಾರ || ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು | ಹರಿಯ ನೆನಸದ ಹಗಲು ನರಕಕ್ಕೆ ತಗಲು ||2|| ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ | ಹರಿಯ ನೆನಸದ ಮಧ್ಯಾಹ್ನವೇ ಕಾನನ || ಹರಿಯ ನೆನಸಿದ ಸಾಯಂಕಾಲವೇ ಸುಕಾಲ | ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ||3|| ಹರಿಯ ನೆನಸಿದ ದಿನವು ನರನಿಗೆ ಸಮ್ಮತವು | ಹರಿಯ ನೆನಸದ ದಿನವು ದುರ್ದಿನವು || ಹರಿಯ ನೆನಸಿದ ನರನು ಅವನೇ ಕೃತಕೃತ್ಯ | ಹರಿಯ ನೆನಸದ ನರಜನ್ಮ ವ್ಯರ್ಥಾ ||4|| ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ | ಹರಿಯ ನೆನಸದ ರಾತ್ರಿ ಪಂಚಪಾತ್ರಿ || ಪುರಂದರನ ಪ್ರಿಯ ಸಿರಿ ವಿಜಯವಿಠ್ಠಲನಂಘ್ರಿ | ಮುರಿಯದೇ ಸದಾ ನೆನೆವವನೆ ಮುಕ್ತ ||5||

Thoughts & Reflections

0

No reflections shared yet. Be the first to share your thoughts!

Share your thought